ಲಾಗಿನ್
CenturyTV
ತಾಜಾ ಸುದ್ದಿ
ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು
ಬೆಂಗಳೂರು

ಅಧಿಕಾರಿಗಳ ಜತೆ ಸಿಎಂ ಡಿಕೆ ಶಿವಕುಮಾರ್ ಸಭೆ

sh
ವರದಿ: shashikala ಸ್ಥಳ: ವಿಶೇಷ ಪ್ರತಿನಿಧಿ
ಓದುವ ಸಮಯ: 0 ನಿಮಿಷ ಪ್ರಕಟಣೆ: Jun 04, 2026 388
ಹಂಚಿಕೊಳ್ಳಿ
ಅಧಿಕಾರಿಗಳ ಜತೆ ಸಿಎಂ ಡಿಕೆ ಶಿವಕುಮಾರ್ ಸಭೆ
ಅಕ್ಷರದ ಗಾತ್ರ:

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ರಾಜ್ಯದ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಮಹತ್ವದ ಜಂಟಿ ಸಭೆ ನಡೆಸಿದ ಅವರು, ಮೊದಲ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೇರಿದಂತೆ ಎಲ್ಲಾ 6 ಪ್ರಮುಖ ಯೋಜನೆಗಳನ್ನು ತಕ್ಷಣವೇ ಜಾರಿಗೆ ತರುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು ಎಂದಿರುವ ಸಿಎಂ, ಯಾವುದೇ ಕಾರಣಕ್ಕೂ ಆಡಳಿತ ಹಾದಿ ತಪ್ಪಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ‘ರಾಜ್ಯದಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ನಿಧಿ ದುರ್ಬಳಕೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ತಕ್ಷಣವೇ ಬ್ರೇಕ್ ಹಾಕಿ, ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು’ ಎಂದು ಗುಡುಗಿದ್ದಾರೆ.

ಪ್ರತಿಯೊಬ್ಬ ಅಧಿಕಾರಿಯೂ ನಿಮ್ಮ ಆತ್ಮಸಾಕ್ಷಿ ಒಪ್ಪುವ ಹಾಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸಾರ್ವಜನಿಕರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ, ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸಬೇಕು. ಅಭಿವೃದ್ಧಿಯ ಹಾದಿಗೆ ಮೆಟ್ಟಿಲಾಗಿ ಜನ ಮೆಚ್ಚುವಂತೆ ಕೆಲಸ ಮಾಡುವ ಮೂಲಕ ಸರ್ಕಾರಕ್ಕೂ ಒಳ್ಳೆಯ ಹೆಸರು ತನ್ನಿ, ನೀವೂ ಉತ್ತಮ ಹೆಸರು ಗಳಿಸಿ ಎಂದು ಕರೆ ನೀಡಿದ್ದಾರೆ.

ಸುದ್ದಿ ಹಂಚಿಕೊಳ್ಳಿ:
ಪ್ರಾಯೋಜಿತ ಜಾಹೀರಾತು

ವೆಬ್‌ಸೈಟ್ ಅಭಿವೃದ್ಧಿ ಸೇವೆಗಳು - R Techub

ಸುದ್ದಿ ಪೋರ್ಟಲ್, ಇ-ಕಾಮರ್ಸ್ ಮತ್ತು ಬಿಸಿನೆಸ್ ವೆಬ್‌ಸೈಟ್‌ಗಳ ವಿನ್ಯಾಸಕ್ಕಾಗಿ ಇಂದೇ ಸಂಪರ್ಕಿಸಿ.

ಸಂಪರ್ಕಿಸಿ: 8095556363
footer ad
ಚಾಟ್ ಮಾಡಿ