ಲಾಗಿನ್
CenturyTV
ತಾಜಾ ಸುದ್ದಿ
ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು
ಬೆಂಗಳೂರು

ಸೊಳ್ಳೆ ಮುಕ್ತಿಗೆ ಹೊಸ ಪ್ಲಾನ್‌ವಿನೂತನ ಯೋಜನೆ ಜಾರಿಗೆ

sh
ವರದಿ: shashikala ಸ್ಥಳ: ವಿಶೇಷ ಪ್ರತಿನಿಧಿ
ಓದುವ ಸಮಯ: 0 ನಿಮಿಷ ಪ್ರಕಟಣೆ: Jun 04, 2026 556
ಹಂಚಿಕೊಳ್ಳಿ
ಸೊಳ್ಳೆ ಮುಕ್ತಿಗೆ ಹೊಸ ಪ್ಲಾನ್‌ವಿನೂತನ ಯೋಜನೆ ಜಾರಿಗೆ
ಅಕ್ಷರದ ಗಾತ್ರ:

ಪ್ರಪಂಚಾದ್ಯಂತ ಸೊಳ್ಳೆಗಳ ಕಾಟ ಜಾಸ್ತಿಯಾಗ್ತಿದೆ. ಈ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಅನೇಕರು ಸೊಳ್ಳೆ ನಿವಾರಕಗಳನ್ನ ಬಳಸ್ತಾರೆ. ಆದ್ರೂ ಸೊಳ್ಳೆಕಾಟ ಮಾತ್ರ ಕಡಿಮೆ ಆಗೋದಿಲ್ಲಾ. ಇದೀಗ ಪಂಚದಾದ್ಯಂತ ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ ಒಂದು ವಿನೂತನ ಯೋಜನೆಯನ್ನು ಕೈಗೊಂಡಿದೆ.

ಡಿಬಗ್ ಎಂಬ ಈ ಯೋಜನೆಯ ಅಡಿಯಲ್ಲಿ, 3.2 ಕೋಟಿ ಗಂಡು ಸೊಳ್ಳೆಗಳನ್ನು ಪ್ರಯೋಗಾಲಯದಲ್ಲಿ ಸಿದ್ಧಪಡಿಸಿ ಪರಿಸರಕ್ಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಸೊಳ್ಳೆಗಳು ಓಲ್ಬಾಚಿಯ ಪೈಪಿ ಎಂಬ ನೈಸರ್ಗಿಕ ಬ್ಯಾಕ್ಟೀರಿಯಾವನ್ನು ಹೊಂದಿದ್ದು, ಇವು ಹೆಣ್ಣು ಸೊಳ್ಳೆಗಳೊಂದಿಗೆ ಮಿಲನಗೊಂಡಾಗ ಇಡುವ ಮೊಟ್ಟೆಗಳು ಒಡೆಯುವುದಿಲ್ಲ. ಇದರಿಂದ ಹೊಸ ಸೊಳ್ಳೆಗಳ ಜನನವನ್ನು ತಡೆದು ಕ್ರಮೇಣ ಸೊಳ್ಳೆ ಸಂತತಿಯನ್ನೇ ನಿರ್ಮೂಲನೆ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಗಂಡು ಸೊಳ್ಳೆಗಳು ರಕ್ತ ಹೀರುವುದಿಲ್ಲವಾದ್ದರಿಂದ ಅವು ಮನುಷ್ಯರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ. ಡೆಂಗ್ಯು, ಜಿಕಾ ಮತ್ತು ಚಿಕನ್‌ಗುನ್ಯಾದಂತಹ ರೋಗಗಳನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಿಸಲು ಇದು ಪರಿಣಾಮಕಾರಿ ರಾಸಾಯನಿಕ-ಮುಕ್ತ ಪರ್ಯಾಯ ಮಾರ್ಗವಾಗಿದೆ. ಪ್ರಸ್ತುತ, ಈ ಯೋಜನೆ ಅಮೆರಿಕಾದ ಪರಿಸರ ಸಂರಕ್ಷಣಾ ಸಂಸ್ಥೆ (ಇಪಿಎ) ಪರಿಶೀಲನೆಯಲ್ಲಿದೆ.

ಸುದ್ದಿ ಹಂಚಿಕೊಳ್ಳಿ:
ಪ್ರಾಯೋಜಿತ ಜಾಹೀರಾತು

ವೆಬ್‌ಸೈಟ್ ಅಭಿವೃದ್ಧಿ ಸೇವೆಗಳು - R Techub

ಸುದ್ದಿ ಪೋರ್ಟಲ್, ಇ-ಕಾಮರ್ಸ್ ಮತ್ತು ಬಿಸಿನೆಸ್ ವೆಬ್‌ಸೈಟ್‌ಗಳ ವಿನ್ಯಾಸಕ್ಕಾಗಿ ಇಂದೇ ಸಂಪರ್ಕಿಸಿ.

ಸಂಪರ್ಕಿಸಿ: 8095556363
footer ad
ಚಾಟ್ ಮಾಡಿ