ಲಾಗಿನ್
CenturyTV
ತಾಜಾ ಸುದ್ದಿ
ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು
ರಾಜ್ಯ

ನಾಲ್ವಡಿಯವರ ಬಳಿ ಮತ ಕೇಳುವ ಚಿಂತೆಯಿರಲಿಲ್ಲ

sh
ವರದಿ: shashikala ಸ್ಥಳ: ವಿಶೇಷ ಪ್ರತಿನಿಧಿ
ಓದುವ ಸಮಯ: 0 ನಿಮಿಷ ಪ್ರಕಟಣೆ: Jun 08, 2026 450
ಹಂಚಿಕೊಳ್ಳಿ
ನಾಲ್ವಡಿಯವರ ಬಳಿ ಮತ ಕೇಳುವ ಚಿಂತೆಯಿರಲಿಲ್ಲ
ಅಕ್ಷರದ ಗಾತ್ರ:

ನಾಲ್ವಡಿಯವರ ಬಳಿ ಮತ ಕೇಳುವ ಚಿಂತೆಯಿರಲಿಲ್ಲ. ಬದಲಾಗಿ ಪ್ರಜೆಗಳ ಹಸಿವು, ಶಿಕ್ಷಣ, ಆರೋಗ್ಯ, ನೀರಾವರಿ – ಇವೆಲ್ಲವೇ ಅವರ ಮತಪೆಟ್ಟಿಗೆ ಆಗಿತ್ತು. ಕೆ ಆರ್‌ ಎಸ್, ವಿಶ್ವವಿದ್ಯಾಲಯ, ವಿದ್ಯುತ್ ಯೋಜನೆ ಇವೆಲ್ಲ 5 ವರ್ಷದ ಯೋಜನೆಯಲ್ಲ, ಮುಂದಿನ 100 ವರ್ಷದ ದೂರದೃಷ್ಟಿ .ನಾಲ್ವಡಿಯವರ ಆಡಳಿತವನ್ನು “ಪ್ರಜಾ ಪರಮೋದ್ದೇಶದ ರಾಜರ್ಷಿ ಮಾದರಿ” ಎಂದು ಕರೆದ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ನಾಗಣ್ಣಗೌಡ.ಶ್ರೀರಂಗಪಟ್ಟಣದಲ್ಲಿ ಸಂಜೆಯ ಪ್ರಕಾಶನ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ ಅವರು, “ನಮ್ಮಲ್ಲಿ ಅಧಿಕಾರ ಇದೆ, ಸ್ವಾತಂತ್ರ್ಯ ಇದೆ, ಆದರೆ ನಾಲ್ವಡಿಯವರಲ್ಲಿದ್ದ ಜನರ ಮೇಲಿನ ಜವಾಬ್ದಾರಿಯ ಪ್ರಜ್ಞೆ ಇಂದಿನ ಕೆಲವು ಜನಪ್ರತಿನಿಧಿಗಳಲ್ಲಿ ಕಡಿಮೆಯಾಗಿದೆ. ಮತಕ್ಕಾಗಿ ಯೋಜನೆ ಅಲ್ಲ, ಜನರಿಗಾಗಿ ಯೋಜನೆ ಎಂಬ ನಾಲ್ವಡಿಯ ತತ್ವವನ್ನು ನಾವು ಮತ್ತೆ ನೆನಪಿಸಿಕೊಳ್ಳಬೇಕು”ಎಂದು ಅಭಿಪ್ರಾಯಪಟ್ಟರು.ಕೊನೆಯಲ್ಲಿ, “ರಾಜರ್ಷಿ ಎಂಬ ಬಿರುದು ಸುಮ್ಮನೆ ಬಂದದ್ದಲ್ಲ. ಅದು ಜನಸೇವೆಯಿಂದ ಗಳಿಸಿದ ಕಿರೀಟ. ಆ ಕಿರೀಟವನ್ನು ಇಂದಿನ ಪ್ರಜಾಪ್ರತಿನಿಧಿಗಳು ತಮ್ಮ ನಡವಳಿಕೆಯಲ್ಲಿ ಧರಿಸಿದರೆ ಪ್ರಜಾಪ್ರಭುತ್ವ ಇನ್ನಷ್ಟು ಬಲಗೊಳ್ಳುತ್ತದೆ” ಎಂದು ನಾಗಣ್ಣಗೌಡರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಗಾಂಧಿವಾದಿ ಡಾ ಬಿ ಸುಜಯ್ ಕುಮಾರ್ ಮಾತನಾಡಿ,1925ರಲ್ಲಿ ನಾಲ್ವಡಿಯವರ ಆಡಳಿತ ಸುಧಾರಣೆಗಳು ಮತ್ತು ಪ್ರಜಾ ಕಲ್ಯಾಣ ಕಾರ್ಯಗಳನ್ನು ಮೆಚ್ಚಿ, ಅವರನ್ನು“ರಾಜರ್ಷಿ” ಎಂಬ ಬಿರುದನ್ನು ಮಹಾತ್ಮ ಗಾಂಧಿಯವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ನೀಡಿದ್ದರು.ಸಾಮಾನ್ಯ ರಾಜ ಅಲ್ಲ, ತಪಸ್ವಿಯಂತೆ ಜನಸೇವೆಯನ್ನೇ ಧರ್ಮವೆಂದುಕೊಂಡ ರಾಜ. ಅಂದಿನಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ “ರಾಜರ್ಷಿ” ಎಂದೇ ಜನಪ್ರಿಯರಾದರು ಎಂದರು.

ಕಾರ್ಯಕ್ರಮದಲ್ಲಿ ಸಂಜಯ ಪ್ರಕಾಶನದ ಎಸ್ ಎಂ ಶಿವಕುಮಾರ್, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಪ್ರಜ್ಞಾವಂತ ವೇದಿಕೆಯ ಸಂಚಾಲಕ ಸಿ ಎಸ್ ವೆಂಕಟೇಶ್, ವಕೀಲರಾದ ಎಸ್ ಆರ್ ಸಿದ್ದೇಶ್, ಬಾಲರಾಜು, ಚಿಂತಕ ಕ್ಯಾತನಹಳ್ಳಿ ಚಂದ್ರಣ್ಣ, ಪ್ರಾಧ್ಯಾಪಕ ಧನಂಜಯ, ಬ್ಯಾಡರಹಳ್ಳಿ ಪ್ರಕಾಶ್, ದರಸಗುಪ್ಪೆ ಸುರೇಶ್, ಗಂಜಾಂ ಶ್ರೀನಿವಾಸ್, ಕಡತನಾಳು ಶಿವಕುಮಾರ್, ಶೀಲಾ ನಂಜುಡಯ್ಯ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿ ಹಂಚಿಕೊಳ್ಳಿ:
ಪ್ರಾಯೋಜಿತ ಜಾಹೀರಾತು

ವೆಬ್‌ಸೈಟ್ ಅಭಿವೃದ್ಧಿ ಸೇವೆಗಳು - R Techub

ಸುದ್ದಿ ಪೋರ್ಟಲ್, ಇ-ಕಾಮರ್ಸ್ ಮತ್ತು ಬಿಸಿನೆಸ್ ವೆಬ್‌ಸೈಟ್‌ಗಳ ವಿನ್ಯಾಸಕ್ಕಾಗಿ ಇಂದೇ ಸಂಪರ್ಕಿಸಿ.

ಸಂಪರ್ಕಿಸಿ: 8095556363
footer ad
ಚಾಟ್ ಮಾಡಿ